ನಾಲ್ಕನೇ ಕ್ಲಾಸಲ್ಲಿದ್ದೆ. ಅದು ಸಂಜೆಯ ಮಳೆನಿಂತ ಕ್ಷಣ. ಶಾಲಾ ಮೈದಾನವೆಲ್ಲ ನೆನೆದು ಸ್ವಚ್ಛ ಸ್ವಚ್ಛ, ತರಗತಿಗಳ ಸೂರಿನ ಹೆಂಚಿಂದ ಜಾರಿ ನೆಲಕ್ಕೆ ಬಿದ್ದ ಮಳೆಹನಿಗಳ ಸಾಲು ಗುರುತು. ಜೊತೆಗೆ ಮಣ್ಣಿನ ಕಂಪು. ಅದೇ ಸಮಯಕ್ಕೆ ಆಟದ ಬೆಲ್ಲು ಕೇಳಿಸಿತು. ಇನ್ನೇನು ಪುಸ್ತಕ ಮುಚ್ಚಿಟ್ಟು ಹೊರಡಲನುವಾದಾಗ ಕಿವಿಗೆ ಬಿದ್ದಿತು ಇಂಪಾದ ಗೆಜ್ಜೆಯ ಸದ್ದು. ಹೃದಯದಾಳಕ್ಕಿಳಿದು ಕನಸಲಿ ಎಂಬಂತೆ ಮಾತಾಡಿಸಿದ ಆ ಹೆಜ್ಜೆಯ ಸದ್ದಾದರೂ ಯಾರದು?.
ಆ ದಿನ ಮಳೆಮೋಡಗಳೆಲ್ಲ ಕರಗಿ ಆಕಾಶ ತಿಳಿಯಾಗುವಷ್ಟರಲ್ಲಿ ಮನದಲ್ಲಿ ಮನೆಮಾಡಿದ್ದಳು ಆ ಹುಡುಗಿ. ನೋಡಿದರೆ ಫೇರ್ ಅಂಡ್ ಲವ್ಲೀ ಜಾಹಿರಾತು ನೆನಪಾಗುವಷ್ಟು ಸುಂದರಿ ಅವಳಾಗಿರಲಿಲ್ಲ. ಅವಳನ್ನು ಇಷ್ಟ ಪಡಲು ಕಾರಣಗಳೂ ಬೇಕಿರಲಿಲ್ಲ. ಅವಳನ್ನು ನೋಡಿದರೆ ಸಾಕು ಖುಷಿಯಾಗುತ್ತಿತ್ತು. ನನಗದು ತುಂಬಾ ವಿಚಿತ್ರವಾಗಿ ತೋರುತ್ತಿತ್ತು. ಅವಳ ನೆನಪೇ ಒಂದು ಸುಂದರ ಭ್ರಮಾಲೋಕ. ಅಲ್ಲಿಂದ ಹೊರಬರಲು ಪ್ರಯತ್ನಿಸಿದಷ್ಟೂ ಇನ್ನಷ್ಟು ಜಟಿಲವಾಗಿ ಸಿಲುಕುತ್ತಿದ್ದೆ. ಭೀಕರವಾದ ಮೊದಲ ಕ್ರಷ್ ಅದು.
ಮಿಕ್ಕಿ ಮೌಸ್ ಗೆ ಮಿನ್ನಿಯಂಥ ಗೆಳತಿ ಇರಬೇಕಾದರೆ ನನಗೆ ಇವಳೇಕೆ ಗೆಳತಿಯಗಬಾರದು ಎನ್ನಿಸಿದ್ದು ಸುಳ್ಳಲ್ಲ. ಅದೊಂದು ದಿನ ಅವಳನ್ನು ಮಾತಾಡಿಸಬೇಕೆಂದು ತೀರ್ಮಾನಿಸಿದೆ. ಅವಳು ಕುಳಿತಲ್ಲಿಗೆ ಹೋಗಿ “ಒಂದ್ ಪೆನ್ಸಿಲ್ ಇದ್ರೆ ಕೊಡ್ತಿಯಾ...?” ಎಂದು ಕೇಳಿಯೇ ಬಿಟ್ಟೆ! ಅವಳು ನನ್ನ ಕಡೆ ನೋಡಿ ‘ತಾಳು, ನೋಡ್ತೀನಿ’ ಅಂದವಳೇ ತನ್ನ ಪಾಟಿಚೀಲವೆಲ್ಲ ಕೆದಕಿ ಚಿಕ್ಕದಾದ ಒಂದು ಪೆನ್ಸಿಲ್ ನನ್ನ ಕೈಗಿಟ್ಟಳು. ನನ್ನ ಪಾಲಿಗದು ಡೆಲಿಕೇಟ್ ಗಿಫ್ಟ್. ಆಕೆ ಅದನ್ನು ಮತ್ತೆ ವಾಪಸ್ ಕೊಡ್ಬೇಕು ಎಂದೂ ಹೇಳಿದಳು!. ಮರುದಿನ ಬೆಳಗ್ಗೆ ಅವಳಿಗೆ ಅದನ್ನು ವಾಪಸ್ ಕೊಟ್ಟೆ. ಹಾಗೇ ಕೊಡಲು ಮನಸಾಗಲಿಲ್ಲ. ನನ್ನ ಕನ್ನಡ ಪುಸ್ತಕದ ಹಾಳೆಗಳ ನಡುವೆ ಇರಿಸಿದ್ದ ಒಂದು ನವಿಲುಗರಿಯನ್ನು ಸೇರಿಸಿ ಅವಳಿಗೆ ಕೊಟ್ಟೆ. ಅವಳು ಖುಷಿಯದಳು. ಯಾಕೆ ಕೊಟ್ಟೆ ಅಂತ ಅವಳೂ ಕೇಳಲಿಲ್ಲ, ಯಾಕೆಂದು ನನಗೂ ಗೊತ್ತಿರಲಿಲ್ಲ.
ಮಲ್ಲೇಶಪ್ಪ ಮೇಷ್ಟ್ರು ಅದೊಂದು ದಿನ ಕ್ಲಾಸಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಹುಡುಗ ಹುಡುಗಿಯರನ್ನು ಅಕ್ಕ ಪಕ್ಕದಲ್ಲೇ ಕೂರಿಸಿದರು. ಎಲ್ಲರೂ ಒಂದೆಂಬ ಸ್ನೇಹಭಾವ ಬೆಳೆಯಲಿ ಎಂಬ ಉದ್ದೇಶ ಇದ್ದಿರಬಹುದು. ನನ್ನ ಪಕ್ಕದ ಜಾಗಕ್ಕೆ ಅದೇ ಗೆಜ್ಜೆಯ ಹುಡುಗಿ ಬರಬೇಕೆ? ನನಗಾಗ ಏನನ್ನಿಸಿತೋ ನೆನಪಿಲ್ಲ. ಆದರೆ ದಿನಾ ಪೆನ್ಸಿಲ್ ಕೇಳಬಹುದಲ್ಲ ಎಂದು ಅಂದುಕೊಂಡಿದ್ದಂತೂ ನಿಜ. ಅಲ್ಲಿಂದ ದಿನವೂ ಅವಳೊಂದಿಗೆ ಮಾತಾಡಬೇಕಾಗಿ ಬಂತು. ಆದರೆ ಸ್ವಲ್ಪ ದಿನಗಳಲ್ಲೇ ಅವಳ ಮೇಲಿನ ಕ್ರಷ್ ಮಾಯವಾಯಿತು. ಏಕೆಂದು ಗೊತ್ತಾಗಲಿಲ್ಲ. ಆದರೆ ಅದೆಂದೂ ಮರೆಯಲಾಗದ್ದು.

0 comments:
Post a Comment